ಗೋಣುಕುರು -
ಗಲಗ್ರಂಥಿಯ (ಟಾನ್ಸಿಲ್) ಹೊರವಲಯದಲ್ಲಿ ಆಗುವ ಹುಣ್ಣು (ಕ್ವಿನ್ಸಿ). ಇದು 12 ವರ್ಷಗಳಿಂದ ಹಿಡಿದು 35 ವರ್ಷಗಳವರೆಗಿನವರಲ್ಲಿ ಗಂಡಸರಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ಮಳೆ ಮತ್ತು ಚಳಿಗಾಲಗಳಲ್ಲಿ ಇದರ ಏರಿಕೆ ಹೆಚ್ಚು. ಈ ಕಾಯಿಲೆಯಿದ್ದ ರೋಗಿಗೆ ಬಾಯಿ ತೆರೆಯುವುದು ಕಷ್ಟ. ಏನನ್ನೂ ನುಂಗಲಾಗುವುದಿಲ್ಲ. ದೇಹದಲ್ಲಿ ಜ್ವರವೂ ನೋವೂ ಇರುತ್ತವೆ. ಹುಣ್ಣಿರುವ ಸ್ಥಳದಲ್ಲಿ ಗಂಟಲಿನ ಒಳಭಾಗವೂ ಕತ್ತಿನ ಹೊರಭಾಗವೂ ಊದಿಕೊಂಡಿರುತ್ತವೆ. ಕಿರುನಾಲಗೆ ಊದಿ ಅದರ ತುದಿ ಹುಣ್ಣಿನ ಕಡೆಗೆ ಬಾಗಿರುತ್ತದೆ. ಗಲಗ್ರಂಥಿಯ ಹೊರಮುಖದ ಪೊರೆಯಲ್ಲಿ ಕೀವುತುಂಬಿರುವುದು ಯುಕ್ತ ವೇಳೆಯಲ್ಲಿ ಔಷಧಿ ಹಾಗೂ ಶಸ್ತ್ರಚಿಕಿತ್ಸೆಯಿಂದ ಇದನ್ನು ಗುಣಪಡಿಸಬಹುದಾದರೂ ಅವಜ್ಞೆ ಮಾಡಿದಲ್ಲಿ ಇದೊಂದು ಪ್ರಾಣಾಂತಿಕ ಬೇನೆಯಾಗಬಹುದು.
(ಪಿ.ಎಸ್.ಎಸ್‍ಯು.)ss

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ